ಕೇಂದ್ರ ವಿತ್ತ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಅರುಣ್ ಜೇಟ್ಲಿ ಅವರು ನಿಧನರಾಗಿದ್ದಾರೆ. ಹೌದು ದೆಹಲಿಯ ಏಮ್ಸ್ ಆಸ್ಪತ್ರೆ ಹೊರಡಿಸಿರುವ ಪ್ರಕಟಣೆಯಲ್ಲಿ ಜೇಟ್ಲಿ ಅವರು ಮದ್ಯಾಹ್ನ 12.07ಕ್ಕೆ ನಿಧನರಾಗಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿದ್ದ ಅವರು, ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಅಲ್ಲದೇ ಹಣಕಾಸು ಮತ್ತು ರಕ್ಷಣಾ ಖಾತೆಯಂತಹ ದೊಡ್ಡ ಖಾತೆಯನ್ನು ನಿಭಾಯಿಸಿದ್ದರು. 

ಯಾವಾಗ ಪ್ರಧಾನಿ ನರೇಂದ್ರ ಮೋದಿ ಅವರು ನೋಟು ರದ್ದತಿ ನಿರ್ಧಾರ ತೆಗೆದುಕೊಂಡರೋ ಆಗ ರಾಷ್ಟ್ರದಲ್ಲಿ ಏರು ಪೇರು ಉಂಟಾಯಿತು. ಉದ್ಯೋಗ ಕಡಿತವಾಯಿತು. ರಾಷ್ಟ್ರದಲ್ಲಿ ಒಂದು ರೀತಿಯ ದಂಗೆಯ ವಾತಾರವರಣವೇ ಉಂಟಾಯಿತು.. ಆ ಸಂದರ್ಭದಲ್ಲಿ ವಿತ್ತ ಸಚಿವರಾಗಿದ್ದ ಅರುಣ್ ಜೇಟ್ಲಿ ಅವರು ಸರ್ಕಾರದ ನಡೆಯನ್ನು ಸಮರ್ಥನೆ ಮಾಡಿಕೊಂಡಿದ್ದರು. ಮೋದಿ ಪರವಾಗಿ ಮಾತನಾಡಿದ್ದರು. 

ಆದರೆ ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಅವರು ಸ್ಪರ್ಧೇ ಮಾಡಲಿಲ್ಲ. ಅನಾರೋಗ್ಯದ ಸಮಸ್ಯೆಯಿಂದ ಅರುಣ್ ಜೇಟ್ಲಿ ಅವರು ಚುನಾವಣೆಯಿಂದ ಹಿಂದೆ ಸರಿದಿದ್ದರು. ಆದರೆ ಕೊನೆಗೂ ಅವರ ಆರೋಗ್ಯ ಸರಿಹೋಗದೇ ಆಗಸ್ಟ್ 9ರಿಂದಲೇ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿತ್ತು. ಹೃದ್ರೋಗ ಹಾಗೂ ಇತರೆ ತಜ್ಙ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿತ್ತು. ಆದರೂ ಚಿಕಿತ್ಸೆ ಯಶಸ್ವಿ ಆಗಲೇ ಇಲ್ಲ. ಇಂದು ಮದ್ಯಾಹ್ನ ಅವರು ಕೊನೆಯುಸಿರೆಳೆದರು.

ಇದಕ್ಕೂ ಮೊದಲು ಅವರು 2019ರ ಜನವರಿಯಲ್ಲಿ ವೈದ್ಯಕೀಯ ತಪಾಸಣೆಗಾಗಿ ನ್ಯೂಯಾರ್ಕ್‌ಗೆ ಹೋಗಿದ್ರು. ಆದರೆ ಕಳೆದ ವರ್ಷ ಏಪ್ರಿಲ್‌ನಲ್ಲಿ ಕಿಡ್ನಿ ಸಮಸ್ಯೆ ಎದುರಾಗಿತ್ತು. ದೆಹಲಿಯ ಏಮ್ಸ್‌ಗೆ ದಾಖಲಾಗಿದ್ದರು. ಕೊಬೆಗೆ ಅವರು ಕಳೆದ ಮೇನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಹೀಗಾಗಿ ಅವರ ಅನುಪಸ್ಥಿತಿಯಲ್ಲಿ ಕೊನೆಯ ಬಬಜೆಟ್ ಅನ್ನು ಪಿಯೂಶ್ ಗೋಯಲ್ ಅವರು ಮಂಡಿಸಿದ್ದರು. ನಂತರ ಅರುಣ್ ಜೇಟ್ಲಿ ಅವರು ಸರಿ ಹೋಗುತ್ತಾರೆ ಎಂದು ಹೇಳಲಾಗುತ್ತಿತ್ತು. ಅವರ ಆರೋಗ್ಯ ಸುಧಾರಿಸಬಹುದು ಎನ್ನುವ ನಿರೀಕ್ಷೆ ಇತ್ತು ಆದರೆ, ಅದು ಸಾಧ್ಯವಾಗಲೇ ಇಲ್ಲ. 

ಅರುಣ್ ಜೇಟ್ಲಿ ಅವರ ನಿಧನಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರಲ್ಲದೇ ದೇಶದ ಪ್ರಮುಖ ಎಲ್ಲ ರಾಜಕೀಯ ನಾಯಕರು ಕಂಬನಿ ಮಿಡಿದಿದ್ದಾರೆ. ನಾಳೆ ಮದ್ಯಾಹ್ನ 2 ಗಂಟೆಗೆ ಅವರ ಅಂತ್ಯಕ್ರಿಯೆ ನಡೆಯಲಿದೆ.
 


మరింత సమాచారం తెలుసుకోండి: