ಉಪೇಂದ್ರ ಮತ್ತು ಶಿವರಾಜ್ ಕುಮಾರ್ ಈ ಇಬ್ಬರ ಚಿತ್ರಗಳು ಇದೇ ತಿಂಗಳಲ್ಲಿ ಬಿಡುಗಡೆ ಆಗುತ್ತಿವೆ. ಉಪೇಂದ್ರ ಅಭಿನಯದ ಐ ಲವ್ ಯೂ ಮತ್ತು ಶಿವರಾಜ್ ಕುಮಾರ್ ಅಭಿನಯದ ರುಸ್ತುಂ ಎರಡೂ ಚಿತ್ರಗಳು ಒಂದೇ ದಿನ ರಿಲೀಸ್ ಆಗಲಿವೆ ಎನ್ನಲಗಿತ್ತು. ಆದರೆ ಇದೀಗ ರುಸ್ತುಂ ಚಿತ್ರ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ.

 

ಹೌದು, ಐ ಲವ್ ಯೂ ಚಿತ್ರ ಜೂನ್ ೧೪ ರಂದು ಬಿಡುಗಡೆ ಆಗಲಿದೆ. ಆದರೆ ರುಸ್ತುಂ ಚಿತ್ರ ಜೂನ್ ೨೮ ರಂದು ಬಿಡುಗಡೆ ಆಗಲಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಐ ಲವ್ ಯೂ ಚಿತ್ರದ ಹಾದಿ ಇದೀಗ ಸುಗಮವಾಗಿದೆ ಎನ್ನಬಹುದು.

ರುಸ್ತುಂ ಚಿತ್ರದ ಗ್ರಾಫಿಕ್ಸ್ ಕೆಲಸಗಳು ಬಾಕಿ ಇದ್ದು, ಇನ್ನೂ ಈ ಚಿತ್ರಕ್ಕೆ ಸೆನ್ಸಾರ್ ಆಗಿಲ್ಲ. ಹೀಗಾಗಿ ರಿಲೀಸ್ ಡೇಟ್ ಮುಂದಕ್ಕೆ ಹಾಕಲಾಗಿದೆ. ಈ ಕಾರಣಕ್ಕಾಗಿ ಉಪೇಂದ್ರ ಅವರ ಐ ಲವ್ ಯೂ ಚಿತ್ರಕ್ಕೆ ಸದ್ಯ ಯಾವುದೇ ಪೈಪೋಟಿ ಚಿತ್ರ ಇಲ್ಲದೇ ಉಪೇಂದ್ರ ಅವರ ಹಾದಿ ಸುಗಮವಾಗಿದೆ‌.

ರುಸ್ತುಂ ಚಿತ್ರದಲ್ಲಿ ದೊಡ್ಡ ತಾರಾಗಣವೇ ಇದೆ. ಶಿವರಾಜ್ ಕುಮಾರ, ವಿವೇಕ್ ಓಬೇರಾಯ್, ಶ್ರದ್ಧಾ ಶ್ರೀನಾಥ್, ರಚಿತಾ ರಾಮ್, ಮಯೂರಿ ಎಲ್ಲರೂ ಚಿತ್ರದಲ್ಲಿ ಇದ್ದಾರೆ. ಈ ಚಿತ್ರವನ್ನು ರವಿವರ್ಮ ನಿರ್ದೇಶನ ಮಾಡಿದ್ದು, ಜಯಣ್ಣ ಅವರು ನಿರ್ಮಾಣ ಮಾಡಿದ್ದಾರೆ‌ ಜೊತೆಗೆ ಅನೂಪ್ ಅವರ ಸಂಗೀತ ಸಂಯೋಜನೆ ಇದೆ.

మరింత సమాచారం తెలుసుకోండి: