ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಹೊಸ ಗಾಳಿಯೊಂದು  ಬೀಸುತ್ತಿದೆ. ಒಂದು ಕಾಲದಲ್ಲಿ ಶತ್ರುಗಳಂತೆ  ಕಿತ್ತಾಡುತ್ತಿದ್ದ ಈ ನಾಯಕರು ಇದೀಗ ದೋಸ್ತ್ ಗಳಂತೆ ಕಾಣಿಲಿಕೊಳ್ಳುತ್ತಿದ್ದಾರೆ. ಅಣ್ಣ ತಮ್ಮಂದಿರಂತೆ ಭಾಷಣ ಮಾಡುತ್ತಿದ್ದಾರೆ. ಅಸಲು ಏನಿದರ ಮರ್ಮ ಎಂಬುದೇ ಕಾಣತಿಲ್ಲ. ಬಿಜೆಪಿ ಜೆಡಿಎಸ್ ಹೊಂದಾಗಲು ಕಾರಣವೇನು? ನಡೆಯುತ್ತಿರುವುದಾದರೂ ಏನು ಎಂದು ಹೇಳ್ತೀವಿ ನೋಡಿ. 


ರಾಜ್ಯದಲ್ಲಿ 17 ಶಾಸಕರು ರಾಜೀನಾಮೆ ಮಾಡುವ ಮೂಲಕ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿದ್ದರು. ಇದೀಗ ಸರ್ಕಾರ ಬಿದ್ದ ಬಳಿಕ ನೇರವಾಗಿ ಭೇಟಿಯಾಗದ ಮಾಜಿ ಮುಖ್ಯಮಂತ್ರಿ  ಎಚ್‍.ಡಿ ಕುಮಾರಸ್ವಾಮಿ ಮತ್ತು ಸಿಎಂ ಯಡಿಯೂರಪ್ಪ  ಶುಕ್ರವಾರ ಮಧ್ಯಾಹ್ನ ಮುಖಾಮುಖಿಯಾಗಿ ಹಸ್ತಲಾಘವ ಮಾಡಿ ಕುತೂಹಲ ಮೂಡಿಸಿದ್ದಾರೆ. ಇದರಿಂದ ಜೆಡಿಎಸ್ ಬಿಜೆಪಿ ಒಂದಾಗಿಬಿಟ್ಟಿದೆಯಾ ಎಂದು ಚರ್ಚೆಯಾಗುತ್ತಿದೆ. ಆದರೆ ಅವರಿಬ್ಬರು ಮೀಟ್ ಆಗಿದ್ದು ಏಕೆ ಎಂಬುದು ನೀವೆ ಓದಿ. 


ಬೆಂಗಳೂರಿನ ತಾಜ್ ವೆಸ್ಟ್ ಎಂಡ್‍ನಲ್ಲಿ ಶುಕ್ರವಾರ ಮದುವೆ ರಿಸೆಪ್ಶನ್ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮದಲ್ಲಿ ಮೊದಲು ಯಡಿಯೂರಪ್ಪ, ಕೇಂದ್ರ ಸಚಿವ ಡಿವಿ ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ ಎಸ್‍ಎಂ ಕೃಷ್ಣ ಭಾಗವಹಿಸಿ ಕುರ್ಚಿಯಲ್ಲಿ ಕುಳಿತಿದ್ದರು. ಇವರು ಭೇಟಿ ನೀಡಿದ ಬಳಿಕ ಎಚ್‍ಡಿ ಕುಮಾರಸ್ವಾಮಿಯವರು ನೇರವಾಗಿ ವೇದಿಕೆಗೆ ತೆರಳಿ ವಧು ವರರಿಗೆ ಶುಭಾಶಯ ಕೋರಿ ಕೆಳಗಿಳಿದಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರುಕೆಳಗಡೆ ಇಳಿದು ಬಂದಾಗ ಅಲ್ಲೇ ಕುಳಿತ್ತಿದ್ದ ಯಡಿಯೂರಪ್ಪನವರನ್ನು ನೋಡುತ್ತಾರೆ.

ಮಾಜಿ ಸಿಎಂ ಹತ್ತಿರ ಬರುತ್ತಿದ್ದಂತೆ ಕುಳಿತಿದ್ದ ಬಿಎಸ್‍ವೈ ಎದ್ದು ನಿಂತು ಹೆಚ್‍ಡಿಕೆಯ ಕೈಕುಲುಕಿಮಾತನಾಡುತ್ತಾರೆ.ಬಿಎಸ್‍ವೈ ಕೈ ಕುಲುಕಿದ ನಂತರ ಎಚ್‍ಡಿಕೆ ಬೇರೆ ಕಡೆ ತೆರಳಿದರು. ಇಬ್ಬರು ನಾಯಕರ ಸೌಜನ್ಯದ ಮಾತುಕತೆಯ ವೇಳೆ ಎಸ್‍ಎಂಕೆ, ಡಿವಿಎಸ್, ಎಂ.ಬಿ.ಪಾಟೀಲ್ ಕೂಡ ಸ್ಥಳದಲ್ಲಿ ಇದ್ದರು. ಕೆಲ ದಿನಗಳಿಂದ ಸಿದ್ದರಾಮಯ್ಯ ವಿರುದ್ಧ ನೇರವಾಗಿಯೇ ವಾಗ್ದಾಳಿ ನಡೆಸುತ್ತಿರುವ ಎಚ್‍ಡಿ ಕುಮಾರಸ್ವಾಮಿ ಈಗ ಬಿಜೆಪಿ ವಿರುದ್ಧ ಮೃದು ಧೋರಣೆ ತಳೆದಿದ್ದಾರೆ ಎನ್ನುವ ಮಾತು ಚರ್ಚೆಯಾಗುತ್ತಿದೆ.   ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಸರ್ಕಾರದ ಬಗ್ಗೆ ಮೃದು ಧೋರಣೆ ತೋರುತ್ತಿದ್ದಾರೆ. ಇದನ್ನು ಗಮನಿಸಿದರೆ ಕುಮಾರಸ್ವಾಮಿ ಹಾಗೂ ಸಿಎಂ ಬಿ.ಎಸ್.ಯಡಿಯೂರಪ್ಪ ಒಳ ಒಪ್ಪಂದ ಮಾಡಿಕೊಂಡಂತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದರು.




మరింత సమాచారం తెలుసుకోండి: