ಕಳೆದ ಕೆಲವು ದಿನಗಳಿಂದ ಇಡೀ ಜಗತ್ತನ್ನೇ ಭಯಬೀತರನ್ನಾಗಿ ಮಾಡಿರುವುದು ಅದು ಬೇರೆ ಏನೂ ಅಲ್ಲ. ಅದೇ ಕರೋನಾ ವೈರಸ್. ಹೌದು ಇದರಿಂದ ವ್ಯಾಪಾರ, ಉದ್ಯಮ ಹಾಗೂ ಮನೋರಂಜನೆ ಮತ್ತು ಕ್ರಿಕೇಟ್ ಕ್ಷೇತ್ರದ ಮೇಲೆ ಬೀರಿದ ಪರಿಣಾಮ ಹಾಗೂ ನಷ್ಟ ಅಷ್ಟಿಷ್ಟಲ್ಲ. ಅದೆಷ್ಟೋ ಮಂದಿ ಈ ಮಹಾಮಾರಿ ಕರೊನಾಗೆ ಬಲಿ ಆಗಿದ್ದಾರೆ. ಲೆಕ್ಕವಿಲ್ಲದಷ್ಟು ಜನರು ಇದರ ಭೀತಿಯಿಂದ ತತ್ತರಿಸಿ ಹೋಗಿದ್ದಾರೆ. ಇನ್ನು ಸಿನಿಮಾ ಕ್ಷೇತ್ರ ಕೂಡ ಕರೋನಾಗೆ ಹೊರತಲ್ಲ ಬಿಡಿ. ಈ ಕುರಿತು ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

 

ಸ್ಯಾಂಡಲ್ ವುಡ್ ನಲ್ಲಿ ಚಿತ್ರಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಯಾರು ಬೇಕಾದರೂ ಸಿನಿಮಾ ಮಾಡಬಹುದು ಎನ್ನುವ ಅವಕಾಶ ಇರುವುದರಿಂದ ಸ್ಯಾಂಡಲ್‌ ವುಡ್ ಚಿತ್ರರಂಗ ಇದೀಗ ದೊಡ್ಡದಾಗಿ ಬೆಳೆದು ನಿಲ್ಲುತ್ತಿದೆ. ಒಂದು ವಾರದಲ್ಲಿಯೇ ಸಿನಿಮಾಗಳು ಎರಡಂಕಿ ದಾಟಿ ಬಿಡುಗಡೆ ಆಗುತ್ತಿವೆ. ಆದರೆ ಪ್ರೇಕ್ಷಕರು ಮಾತ್ರ ಅತ್ತ ಚಿತ್ರಗಳ ಕಡೆಗೆ ತಲೆ ಹಾಕುತ್ತಲೇ ಇಲ್ಲ, ಕಾರಣ ಕೇಳಿದರೆ ಬೇರೆನೂ ಇಲ್ಲ. ಗಾಳಿಯ ಮೂಲಕ ಹರಡುವ ಕರೋನಾ. ಹೌದು ಕರೋನಾ ಹಾವಳಿ ಹೆಚ್ಚಾದ ಮೇಲೆ ಜನ ಥೀಯಟರ್ ಗೆ ಬರೋದನ್ನು ಕಡಿಮೆ ಮಾಡಿದ್ದಾರೆ.

 

ಹಾಕಿದ ಬಂಡವಾಳವೂ ಕೆಲವು ಚಿತ್ರಗಳಿಗೆ ಸರಿಯಾಗಿ ವಾಪಾಸ್ ಬರುತ್ತಿಲ್ಲ. ಹೀಗಾಗಿ ಚಿತ್ರರಂಗದವರು ಕರೋನಾ ಮೇಲೆ ಹಿಡಿಶಾಪ ಹಾಕುತ್ತಿದ್ದಾರೆ. ಈ ವೈರಸ್ ಜಗತ್ತಿನಾದ್ಯಂತ ಶರವೇಗವಾಗಿ ಹರಡುತ್ತಿದೆ. ಈಗಾಗಲೇ ಅನೇಕ ದೇಶಗಳ ಜನ ಜೀವನವನ್ನು ಬಲಿ ತೆಗೆದುಕೊಂಡಿದೆ, ಅಮೇರಿಕ, ಜಪಾನ್ ನಂತರ ಜಗತ್ತಿನ ದೊಡ್ಡ ದೇಶಗಳೇ ಕರೋನಾಗೆ ಬಿದ್ದು ತತ್ತರಿಸುತ್ತಿವೆ. ಇದರಿಂದ ಜಗತ್ತಿನ ಅನೇಕ ದೇಶಗಳ ಆರ್ಥಿಕ ಪರಿಸ್ಥಿತಿಯೂ ನೆಲ ಕಚ್ಚಿದೆ. ಚಿತ್ರರಂಗದ ಕಥೆಯನ್ನಂತೂ ಹೇಳುವುದೇ ಬೇಡ.

 


ಈ ಕರೋನಾ ಭಿತಿ ಎಷ್ಟಿದೆ ಎಂದರೆ, ಕರೊನಾ ತೀವ್ರತೆಯು ಹೆಚ್ಚಾಗುತ್ತಿದ್ದಂತೆಯೇ ಇದರ ಪರಿಣಾಮ ನಮ್ಮ ಕಣ್ಣಿಗೆ ಕಾಣಿಸುತ್ತಿದೆ. ಕೆಲವು ಉದ್ಯಮ ಈಗಾಗಲೇ ತಾತ್ಕಾಲಿಕವಾಗಿ ಮುಚ್ಚಿ ಹೋಗಿವೆ. ಇನ್ನು ಕೆಲವು ಉದ್ಯಮ ನಾಶದತ್ತ ಸಾಗುತ್ತಿವೆ. ಇನ್ನು ದೇಶದ ಆರ್ಥಿಕತೆಗೆ ಒಂದು ಕೊಡುಗೆ ನೀಡುತ್ತಿದ್ದ ಭಾರತೀಯ ಚಿತ್ರರಂಗ ಕೂಡ ಕರೋನಾ ಹೊಡೆತದಿಂದ ಪಾತಾಳಕ್ಕೆ ತಲುಪಿದೆ. ಅದರಲ್ಲಿ ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಚಿತ್ರರಂಗಗಳು ಕರೊನಾ ಭೀತಿಯಿಂದ ಕನಲಿ ಹೋಗುತ್ತಿರೋದು ಸತ್ಯ.

మరింత సమాచారం తెలుసుకోండి: