ಬೆಂಗಳೂರು: ಒಂದು ರಾಜ್ಯದ ಮುಖ್ಯಮಂತ್ರಿ ಅಂದ್ರೆ ಸುಮ್ಮನೇನಾ. ತಮಾಷೆಗೂ  ಸಹ ಸೀರಿಯಸ್ ಹುದ್ದೆಯದು. ಹೆಮ್ಮೆಯ ಮಂತ್ರಿಯ ಸ್ಥಾನವದು. ಆ ಸ್ಥಾನಕ್ಕೆ ಯಡಿಯೂರಪ್ಪ ನವರು 2011ರಲ್ಲಿ ಆಯ್ಕೆಯಾಗಿದ್ದರು. ಡಿ ನೋಟಿಫಿಕೇಶನ್ ಪ್ರಕರಣದಲ್ಲಿ ಯಡಿಯೂರಪ್ಪ ಅವರನ್ನೇ ಬಂಧಿಸಿದ್ದ ಈ ಪೋಲೀಸ್ ಅಧಿಕಾರಿ ಇದೀಗ ಡಿಸಿಪಿ ಆಗಿ ಪ್ರಮೋಷನ್ ಆಗಿದ್ದಾರೆ.  ಈ ಪೋಲೀಸ್ ಅಧಿಕಾರಿಗೆ ಇದೀಗ ಬೆಂಗಳೂರು ಪಶ್ಚಿಮ ಡಿಸಿಪಿಯಾಗಿ ನಿಯೋಜನೆ ಮಾಡಿದ ರಾಜ್ಯ ಸರ್ಕಾರ.ಬಿಜೆಪಿ ವಲಯದೊಳಗೆ ಗಂಭೀರ ಚರ್ಚೆಹುಟ್ಟು ಹಾಕಿರುವ ಅಧಿಕಾರಿಯ ವರ್ಗಾವಣೆ.ಹಾಗಾದರೆ ಯಾರುಆ ಪೊಲೀಸ್ ಅಧಿಕಾರಿ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ. 


2011ರಲ್ಲಿ ಬಿ.ಎಸ್ ಯಡಿಯೂರಪ್ಪ ಅವರನ್ನು ಅರೆಸ್ಟ್ ಮಾಡಿದ್ದ ಪೊಲೀಸ್ ಅಧಿಕಾರಿ  ಎಸ್.ಗಿರೀಶ್ ಗೆ ದೊಡ್ಡ ಪೋಸ್ಟ್ ನೀಡಲಾಗಿದೆ. ಭ್ರಷ್ಟಾಚಾರ ಹಾಗೂ ಡಿನೋಟಿಫಿಕೇಷನ್ ಪ್ರಕರಣದಲ್ಲಿ 2011ರಲ್ಲಿ ಯಡಿಯೂರಪ್ಪ ಅವರನ್ನು ಬಂಧಿಸಿದ್ದ  ಗಿರೀಶ್ ಅವರನ್ನು ಇದೀಗ ಬೆಂಗಳೂರು ಪಶ್ಚಿಮ ಡಿಸಿಪಿಯಾಗಿ ನಿಯೋಜನೆ ಮಾಡಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ. ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್ ರಾಜಣ್ಣ ಅಳಿಯರಾಗಿರುವ ಗಿರೀಶ್, ಕೆ.ಎಸ್.ಆರ್.ಪಿ 9ನೇ ಬೆಟಾಲಿಯನ್ ಕಮಾಂಡೆಂಟ್ ಆಗಿದ್ದರು. ಇದೀಗ ಅವರನ್ನು ಬೆಂಗಳೂರು ಪಶ್ಚಿಮ ಡಿಸಿಪಿಯಾಗಿ ಮಾಡಲಾಗಿದೆ.

ಗಿರೀಶ್ ಗೆ ಉನ್ನತ ಹುದ್ದೆ ನೀಡಿರುವುದಕ್ಕೆ ಬಿಎಸ್ ವೈ ಆಪ್ತರಲ್ಲಿ ಅಸಮಾಧನಗಳು ವ್ಯಕ್ತವಾಗಿವೆ. ಏಕೆ ಈಗಾಗಿದೆ ಎಂಬುದು ಅವರಿಗೆ ತಿಳಿಯುತ್ತಿಲ್ಲವಂತೆ.  ಸಿಎಂ ಬಿಎಸ್ವೈ ಗೆ ಅಧಿಕಾರಿಯ ಹಿನ್ನೆಲೆ ಮುಚ್ಚಿಟ್ಟು ಉನ್ನತ ಹುದ್ದೆ ನೀಡಲಾಗಿದೆಯಾ.ತಮ್ಮನ್ನು ಅರೆಸ್ಟ್ ಮಾಡಿದ್ದನ್ನು ಮರೆತು ಬಿಎಸ್ ವೈ ಉನ್ನತ ಹುದ್ದೆ ನೀಡಿದ್ರಾ? ಅಥವಾ ಪ್ರಭಾವಕ್ಕೆ ಒಳಗಾಗಿ ಗಿರೀಶ್ ರನ್ನು ಪಶ್ಚಿಮ ವಲಯ ಡಿಸಿಪಿ ಮಾಡಲಾಯ್ತಾ? ಹೀಗೆ ಹಲವು ಪ್ರಶ್ನೆಗಳ ಬಗ್ಗೆ ಯಡಿಯೂರಪ್ಪ ಆಪ್ತವಲಯದಲ್ಲಿ ಚರ್ಚೆಗಳು ಶುರುವಾಗಿದೆ.

ಒಟ್ಟಿನಲ್ಲಿ  ಗಿರೀಶ್ ಅವರಿಗೆ ಉನ್ನತ ಹುದ್ದೆ ನೀಡಿ ವರ್ಗಾವಣೆ ಮಾಡಿರುವುದು ಬಿಜೆಪಿ ಪಾಳಯದೊಳಗೆ ಗಂಭೀರ ಚರ್ಚೆ ಹುಟ್ಟು ಹಾಕಿದೆ. ಭ್ರಷ್ಟಾಚಾರ ಹಾಗೂ ಡಿನೋಟಿಫಿಕೇಷನ್ ಪ್ರಕರಣದ ಅಡಿಯಲ್ಲಿ ಬಿಎಸ್ ಯಡಿಯೂರಪ್ಪ ಅವರನ್ನು ಅಕ್ಟೋಬರ್ 15, 2011ರಂದು ಬಂಧಿಸಲಾಗಿತ್ತು. ಬಳಿಕ ನವೆಂಬರ್ 8, 2011ರಂದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.


మరింత సమాచారం తెలుసుకోండి: